https://tinyurl,com/4fn725v5
ಶಾಲಾ ಶಿಕ್ಷಣದ ಬುನಾದಿ ಹಂತದಲ್ಲಿ:----- ಮಕ್ಕಳು ಅದೇ ತಾನೇ ಮನೆಯ ಪರಿಸರದಿಂದ ಬಂದವರಾಗಿದ್ದು, ಅಂತಹ ಸಮಯದಲ್ಲಿ ICTಯು ಮಕ್ಕಳನ್ನು ಕಲಿಕೆಗೆ ಪ್ರೇರಣೆ ನೀಡುವುದು, ಪ್ರೋತ್ಸಾಹ ನೀಡುವುದು, ಕುತೂಹಲಕಾರಿಯಾಗಿ ಕಲಿಕೆಯನ್ನುಂಟು ಮಾಡುವುದು ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ಮಕ್ಕಳ ಕಲಿಕಾ ದೋಷಗಳನ್ನು ನಿವಾರಣೆ ಮಾಡಿ, ಮಕ್ಕಳ ಮುಂದಿನ ಕಲಿಕೆಗೆ ಸಾಧನಾ ತಂತ್ರವಾಗಿ ಮಾರ್ಗದರ್ಶನ ನೀಡುವುದು ಮತ್ತು ಮಕ್ಕಳ ಆಸಕ್ತಿದಾಯಕ, ಆನಂದದಾಯಕ ಸ್ವಕಲಿಕೆಗೆ ICTಯು ಸಂಪೂರ್ಣ ಬೆಂಬಲ ನೀಡುವುದು. ಶಾಲಾ ಶಿಕ್ಷಣದ ತಯಾರಿ ಹಂತದಲ್ಲಿ :---- 1.ಶಿಕ್ಷಕರ ತಾಂತ್ರಿಕ ಜ್ಞಾನ ಹೆಚ್ಚಿಸುವುದು. 2.ಶಿಕ್ಷಕರು ICTಯನ್ನು ಅತ್ಯುತ್ತಮ ಕಲಿಕಾ ಸಾಧನಾವನ್ನಾಗಿ ತಮ್ಮ ಬೋಧನೆಯಲ್ಲಿ ಬಳಸಿಕೊಳ್ಳುವರು. 3.ICTಯು ಶಿಕ್ಷಕರು ತಮ್ಮ ಬೋಧನಾ ವಿಷಯವನ್ನು ಮನದಟ್ಟು ಮಾಡಿಕೊಳ್ಳಲು ಸಹಾಯ ಮಾಡುವುದು. 4.ICTಯು ಶಿಕ್ಷಕರಿಗೆ ಬೋಧನಾ ಮತ್ತು ಕಲಿಕಾ ತಯಾರಿ ಹಂತದಲ್ಲಿ ವಿಷಯವನ್ನು ಸರಳೀಕರಣಗೊಳಿಸಿ, ಹೊಸ ತಂತ್ರಜ್ಞಾನದ ಜ್ಞಾನವನ್ನು ಮೂಡಿಸುವಲ್ಲಿ, ಏಕಾಗ್ರತೆಯನ್ನು ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಾಕಾರಿಯಾಗಿದೆ. 5.ICTಯು ಬೋಧನಾ ಕಲಿಕಾ ಮೌಲ್ಯಮಾಪನವನ್ನು ಮಾಡುವಾಗ ಶಿಕ್ಷಕರಿಗೆ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲು ಹಿಂಪಡೆಯಲು ಮತ್ತು ಡಿಜಿಟಲ್ ಮಾಹಿತಿಯನ್ನು ಸೃಷ್ಟಿಸುವುದು, ಮತ್ತು ರವಾನಿಸಲು ತುಂಬಾ ಅತ್ಯುತ್ತಮ ಮತ್ತು ಅ...