URL ಕಲಿಕೆಯ ಮೌಲ್ಯಮಾಪನ ಕಾರ್ಯತಂತ್ರಗಳು.

ಈ ಕೆಳಗಿನವುಗಳು ಮೌಲ್ಯಂಕನ ಮಾಡಲು ಬಳಸುವ ಕಾರ್ಯ ತಂತ್ರಗಳು/ಮೌಲ್ಯಮಾಪನ ತಂತ್ರಗಳಾಗಿವೆ.
1.ಮಾನಕಗಳು. 
2.ರೂಬ್ರಿಕ್ಸಗಳು. 
3.ತಪಶೀಲು ಪಟ್ಟಿಗಳು. 
4.ಸಾಧನಾ ಕಾರ್ಡುಗಳು. 
5.ದಿನಚರಿ ಪುಸ್ತಕಗಳು. 
6.ಫೈಲ್ ಫೋಲ್ಡರ್. 
7.ಕೃತಿಸಂಪುಟ.
8.ಕಲಿಕಾ ಚಾರ್ಟಗಳು. 
9.ಅವಲೋಕನ ತಪಶೀಲು ಪಟ್ಟಿಗಳು. 
10.ವೀಕ್ಷಣಾ ತಪಶೀಲು ಪಟ್ಟಿಗಳು. (ಸಾಂದರ್ಭಿಕ ದಾಖಲೆ, ಇದನ್ನು ವಿಶೇಷ ಸಂದರ್ಭಗಳಲ್ಲಿ ಬಳಸಬಹುದು)
11.ಸಂಭಾಷಣೆ. 
12.ಪಾತ್ರಾಭಿನಯ,
13.ಗುಂಪು ಚರ್ಚೆಗಳು, ಮುಂತಾದವು. 
                    ಈ ಮೌಲ್ಯಮಾಪನ ಕಾರ್ಯ ತಂತ್ರಗಳನ್ನು ತರಗತಿಯಲ್ಲಿ ಮಕ್ಕಳಿಗೆ ಯಾವುದಾದರೊಂದು ಘಟಕದ ವಿಷಯ ಕಲಿಸಲು/ಕಲ್ಪನೆ ಮೂಡಿಸಲು ಸೂಕ್ತವಾದ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಂಡು ಅನುಕೂಲಿಸಿ ನಂತರ ಇದರ ಮೌಲ್ಯಮಾಪನವನ್ನು ಮಾಡಲು ಅನುಕೂಲವಾದ ಸಾಧನಗಳನ್ನು ಗುರುತಿಸಿಕೊಳ್ಳಲು ಸಹಾಯ ಮಾಡುತ್ತವೆ. ಉದಾ:---ಗುಂಪು ಚರ್ಚೆ ವಿಧಾನವನ್ನು ಅಳವಡಿಸಿಕೊಂಡಾಗ--ಗುಂಪು ಚರ್ಚೆಯ ತಪಶೀಲು ಪಟ್ಟಿಗಳನ್ನು ಬಳಸಬೇಕಾಗುತ್ತದೆ.ಇದರಿಂದ ಮಕ್ಕಳನ್ನು ಗುಂಪುಗಳಾಗಿ ವರ್ಗಿಕರಿಸಬಹುದು, ವೈಯಕ್ತಿಕವಾಗಿ ಗುರ್ತಿಸಬಹುದು, ವಿಶ್ಲೇಷಿಸಬಹುದು,ಯಾವ ಗುಂಪಿಗೆ ಹೆಚ್ಚಿನ ಆದ್ಯತೆ ಮತ್ತು ಪುನರ್ಬಲನ ಚಟುವಟಿಕೆಗಳನ್ನು ನೀಡಬೇಕೆಂಬುದನ್ನು ನಿಖರವಾಗಿ ಗುರ್ತಿಸಬಹುದು ಹಾಗೂ ಸಣ್ಣ ಗುಂಪು ದೊರೆಯುವುದರಿಂದ ವೈಯಕ್ತಿಕ ಪ್ರೋತ್ಸಾಹ ನೀಡಬಹುದು ಮತ್ತು ಹೆಚ್ಚಿನ ಗಮನ ನೀಡಬಹುದು. 
                  ಈ ಮೌಲ್ಯಮಾಪನ ಕಾರ್ಯತಂತ್ರಗಳು ಪ್ರತಿ ಮಗುವಿನ ಸಾಧನಾ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಅತ್ಯುತ್ತಮ ದರ್ಜಾಮಾಪನಗಳಾಗಿವೆ.ಧನ್ಯವಾದಗಳು. 
ಮೋಹಿನ್ ಪಾಶಾಬಿ ಸ ಶಿ GCHPS KOPPAL.