ಕಲಿಕಾ ಫಲ---ಮೌಲ್ಯಗಳು URL

ಮೌಲ್ಯಗಳು  ಕಲಿಕಾ ಫಲಕ್ಕೆ ಸಂಬಂಧಿಸಿದಂತೆ ನಾನು ನನ್ನ ಬೋಧನಾ  ತರಗತಿಯಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. 
1.ಮಕ್ಕಳು ವಿಜ್ಞಾನವನ್ನು ಆಸಕ್ತಿಯಿಂದ ಕಲಿಯಲು ಮತ್ತು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಲು ಅಗತ್ಯ ಮಾರ್ಗದರ್ಶನ ನೀಡುವುದು. 
2.ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವುದು. 
3.ವಿವಿಧ ಸಂದರ್ಭಗಳಲ್ಲಿ ಅನ್ವಯವಾಗುವಂತಹ ಮೌಲ್ಯಗಳಾದ ಪ್ರಾಮಾಣಿಕತೆ, ವಸ್ತು ನಿಷ್ಠತೆ, ಸಹಕಾರ, ನಿರ್ಭಯ ಮತ್ತು ಪೂರ್ವಾಗ್ರಹಮುಕ್ತ ಮೌಲ್ಯಗಳ ಬೆಳವಣಿಗೆಗೆ ಪ್ರೇರಣೆ ನೀಡುವುದು. 
4.ಗುಂಪು ಚಟುವಟಿಕೆ --ಮಕ್ಕಳಲ್ಲಿ ಸಹಕಾರ ಮೌಲ್ಯವನ್ನು ಬೆಳೆಸುವುದು. 
5.ವಿಜ್ಞಾನದ ಮಾದರಿ ತಯಾರಿಕೆ--ಮಕ್ಕಳಿಂದ ಮಾಡಿಸುವುದು, ಉದಾಹರಣೆ---ಹೃದಯ, ಮೂತ್ರಜನಕಾಂಗ ಮುಂತಾದ ಮಾದರಿಗಳನ್ನು ತಯಾರಿಸಲು ಒಬ್ಬರು ಇನ್ನೊಬ್ಬರಿಗೆ ಸಹಕಾರ ನೀಡಲು ಪ್ರೇರಣೆ ನೀಡುವುದು. 
6.ಪ್ರಯೋಗಗಳು ವರದಿ  ತಯಾರಿಸುವರ.,ಉದಾಹರಣೆ--ಗಾಳಿಗೆ ತೂಕವಿದೆ, ಸಸ್ಯದ ಭಾಗಗಳ ಪ್ರಯೋಗದ ವರದಿ. 
7.ವಿಜ್ಞಾನದ ಸಂಶೋಧನೆಗಳ ಚಿತ್ರ ಸಹಿತ ವಿಷಯ ಸಂಗ್ರಹಿಸಿ ಆಲ್ಬಮ್ ತಯಾರಿಕೆಯ ವೈಯಕ್ತಿಕ ಚಟುವಟಿಕೆಯ ನಿಯೋಜಿತ ಕಾರ್ಯ ಮಾಡಿಸುವುದು. 
8.ವಿಜ್ಞಾನಿಗಳ ಹೆಸರು, ಬಾಲ್ಯ ಜೀವನ, ಮತ್ತು  ಅವರು  ಕಂಡುಹಿಡಿದಿರುವ ಸಂಶೋಧನೆಗಳ ಬಗ್ಗೆ ಪ್ರಬಂಧ, ಗುಂಪು ಚರ್ಚೆ, ಆಶುಭಾಷಣ, ರಸಪ್ರಶ್ನೆ ಮುಂತಾದ ಚಟುವಟಿಕೆಗಳನ್ನು ಮಾಡಿಸುವುದು. 
9.ಮಕ್ಕಳು ತಯಾರಿಸಿದ ಮಾದರಿ ಚಿತ್ರಗಳನ್ನು ಮತ್ತು ಪ್ರಯೋಗಗಳ ವಸ್ತು ಪ್ರದರ್ಶನ ಏರ್ಪಡಿಸುವುದು. 
                  ಹೀಗೆ ತರಗತಿ ಯಲ್ಲಿ ವೈವಿಧ್ಯತೆಯ ವಾತಾವರಣವನ್ನು ನಿರ್ಮಾಣ ಮಾಡಿದಾಗ ಮಕ್ಕಳು ಅತ್ಯುತ್ತಮ ಪ್ರಯತ್ನ ಮಾಡುವರು. ಧನ್ಯವಾದಗಳು. 
ಮೋಹಿನ್ ಪಾಶಾಬಿ ಸ ಶಿ GCHPS KOPPAL.