URL ಕಲಿಕೆಯ ಮೌಲ್ಯಂಕನ ವಿಧಾನಗಳು
ಈ ಕೆಳಗಿನವುಗಳು ಬುನಾದಿ ಹಂತದಲ್ಲಿ ವಿದ್ಯಾರ್ಥಿ ಗಳ ಮೌಲ್ಯಂಕನಕ್ಕಾಗಿ ನಾವು ಬಳಸಬಹುದಾದ ವಿವಿಧ ಮೌಲ್ಯಂಕನ ವಿಧಾನಗಳು.
ಬುನಾದಿ ಹಂತದಲ್ಲಿ 1ನೇತರಗತಿ ಯಿಂದ 3ನೇತರಗತಿ ಗಳವರೆಗೆ ಅನೌಪಚಾರಿಕ ಮತ್ತು ಮೌಖಿಕ ವಿಧಾನಗಳನ್ನು ಮೌಲ್ಯಂಕನಕ್ಕಾಗಿ ಹೆಚ್ಚು ಬಳಸಿಕೊಳ್ಳಲಾಗುವುದು, ಅದಕ್ಕಾಗಿ ತರಗತಿಯಲ್ಲಿ ಶಿಶು ಸ್ನೇಹಿ ಪರಿಸರ ನಿರ್ಮಾಣ ಮಾಡಲಾಗುವುದು.
1.ಆಲಿಸುವುದು ಮತ್ತು ಮಾತನಾಡುವ ವಿಧಾನ. ಇಲ್ಲಿ ಪ್ರತಿಯೊಂದು ಮಗು ಕಥೆ ಅಥವಾ Rhymes ಹೇಳುವುದು, ಇದನ್ನು ಉಳಿದ ಮಕ್ಕಳು ಆಲಿಸಿ ನಂತರ ಅವರಂತೆ ಮಾತನಾಡುವರು.
2.ಮಕ್ಕಳ ಕಲಿಕೆಯ ಪುನರ್ಬಲನಗೊಳಿಸಲು ಕಪ್ಪು ಹಲಗೆಯ ಬರವಣಿಗೆಗೆ ಅವಕಾಶ ನೀಡುವುದು.
3.ಗುಂಪು ತಟ್ಟೆಗಳ ಕಲಿಕೆಯ ಚಲನೆಯ ವಿಧಾನ.
4.ಗೆಳೆಯರ ಸಹಾಯ.
5.ಕಲಿಕಾ ಕಾರ್ಡುಗಳ ಬಳಕೆ.
6.ಅಭ್ಯಾಸ ಪುಸ್ತಕಗಳ ಗಣನೀಯ ಬಳಕೆ.
7.ಅಭ್ಯಾಸ ಮತ್ತು ಮೌಲ್ಯಮಾಪನ ಚಟುವಟಿಕೆಗಳ ಹೆಚ್ಚು ಬಳಕೆ.
8.ಪ್ರತಿ ಮಗುವಿನ ಕಲಿಕಾ ಸಮಯ ಸದ್ಬಳಕೆ.
9.ಅಕ್ಷರ ನೋಡಿ ಬರೆಯಿರಿ.
10.ಪದಗಳನ್ನು ನೋಡಿ ಬರೆಯಿರಿ.
11.ವಾಕ್ಯಗಳನ್ನು ನೋಡಿ ಬರೆಯಿರಿ.
12.ನನ್ನ ಸಾಧನೆ--ಚಿತ್ರ ನೋಡಿ ಬಿಟ್ಟ ಅಕ್ಷರ ಬರೆ.
13.ಚಿತ್ರ ನೋಡಿ ವಾಕ್ಯ ಸರಿಪಡಿಸಿ ಬರೆ.
14.ಚಿತ್ರ ಸಹಿತ ಪದಬಂಧ--ಪದರಚನೆ.
15.ಸರಿಯಾದ ಪದ ಹುಡುಕಿ ಬಣ್ಣ ತುಂಬು.
16.ಭಾಷಾ ಆಟಗಳು.
17.ಆಲೋಚಿಸಿ ಉತ್ತರಿಸಿ.
18.ಚಿತ್ರ ನೋಡಿ ಉತ್ತರಿಸಿ.
19.WORKSHEETSಬಳಕೆ ವಿಧಾನ ಮುಂತಾದವು.
ವಿಶೇಷವಾಗಿ ಕಾಗದ ಮತ್ತು ಪೆನ್ಸಿಲ್ ಪರೀಕ್ಷೆಗಳಂತಹ ಮೌಲ್ಯಂಕನಗಳನ್ನು ಹೊರತು ಪಡಿಸಿ ಈ ಕೆಳಗಿನವುಗಳನ್ನು,
1.ಚಿಕ್ಕ ಚಿಕ್ಕ ನೀತಿ ಕಥೆಗಳ ಬಳಕೆ.
2.ಪ್ರಾಸಪದ/Rhymes ಗಳ ಹೆಚ್ಚು ಬಳಕೆ.
3.ಒಗಟು ಬಿಡಿಸಿ ಉತ್ತರ ಹೇಳಿ.
4.ಪದಬಂಧ ಬಿಡಿಸಲು ಆಲೋಚಿಸಿ ಉತ್ತರ ಹೇಳಿ.
5.ಆಡಿಯೋ ಮತ್ತು ವಿಡಿಯೋಗಳ ಬಳಕೆ.
6.ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಅವುಗಳ ಬಗ್ಗೆ ಮೌಖಿಕ ಮೌಲ್ಯಂಕನ ಮಾಡುವುದು.
7.ತರಗತಿವಾರು ಮತ್ತು ವಿಷಯವಾರು ಕಾರ್ಡ್ ಗಳ ಬಳಸಿ--ಮೌಲ್ಯಂಕನ.
ಒಟ್ಟಿನಲ್ಲಿ ಮಕ್ಕಳ ಸ್ವ--ಕಲಿಕೆ, ಸ್ವ--ವೇಗದ ಕಲಿಕೆ ಮತ್ತು ಸಂತಸದಾಯಕ ಕಲಿಕೆಯ ಮೌಲ್ಯಂಕನ ಮಾಡಲಾಗುವುದು. ಧನ್ಯವಾದಗಳು.
ಮೋಹಿನ್ ಪಾಶಾಬಿ ಸ ಶಿ GCHPS KOPPAL.