https://nnishtha-ffln,blogspot, com/2021/08activity-3-share-your-thoughts,html
ಮೋಹಿನ್ ಪಾಶಾಬಿ ಸ ಶಿ GCHPS KOPPAL .
ಎಫ್ ಎಲ್ ಎನ್ ನ ಗುರಿ ಮತ್ತು ಉದ್ದೇಗಳನ್ನು ಸಾಧಿಸುವಲ್ಲಿ ಇಸಿಸಿಇ ನ ಪಾತ್ರ ತುಂಬಾ ಮುಖ್ಯವಾಗಿದೆ.ಎಫ್ ಎಲ್ ಎನ್ ನ ಗುರಿ, 250 ಮಿಲಿಯನ್ ಶಾಲೆಗೆ ಹೋಗುವ ಮಕ್ಕಳು ಇದ್ದರೂ ಆರಂಭಿಕ ಕಲಿಕಾ ಪ್ರಕ್ರಿಯೆಯಲ್ಲಿ ಏನು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಏನೇನೋ ಇದ್ದರೂ ಇರಬಹುದು, ಪಾಲಕರ ಮತ್ತು ನಿರಾಸಕ್ತಿ, ಜೊತೆಗೆ ನುರಿತ ಮತ್ತು ಅನುಭವಿ ಶಿಕ್ಷಕರ ಸೇವಾ ಕೊರತೆಯಾಗಿರಬಹುದು, ಸಂಶೋಧನೆಗಳ ಪ್ರಕಾರ ಎಫ್ ಎಲ್ ಎನ್ ನಲ್ಲಿ ವಿದ್ಯಾರ್ಥಿಗಳು ಒಮ್ಮೆ ಹಿಂದುಳಿದರೆ ಅವರು ಬಹಳ ವರ್ಷಗಳ ಕಾಲ ಸಮವಾದ ಕಲಿಕಾ ವಕ್ರಗಳನ್ನು ಮತ್ತು ದೋಷಗಳನ್ನು ಹೊಂದಿರುತ್ತಾರೆ. ಭಾಷಾ ಪಠ್ಯ ಪುಸ್ತಕಗಳಲ್ಲಿನ ಪಠ್ಯಗಳು ಮತ್ತು ಗಣಿತದ ಪರಿಕಲ್ಪನೆಗಳು ನಂತರದ ತರಗತಿಗಳಲ್ಲಿ ಹೆಚ್ಚಿನ ಸಂಕೀರ್ಣ ಮತ್ತು ಅಮೂರ್ತವಾಗುವುದರಿಂದ ಕಲಿಕೆಯ ಅಂತರವು ಆ ಹಂತದಿಂದ ವಿಸ್ತರಿಸುತ್ತಲೇ ಹೋಗುತ್ತದೆ ಆದ್ದರಿಂದ ಶಾಲಾ ಶಿಕ್ಷಣದ ಬುನಾದಿ ಮತ್ತು ವಿವಿಧ ಹಂತಗಳಲ್ಲಿ ಮಕ್ಕಳ ಹಿಂದುಳಿದ ಕಲಿಕಾ ಮಟ್ಟಗಳ ಬಗ್ಗೆ ಇಂದು ಬಲವಾದ ತಕ್ಷಣದ ರಾಷ್ಟ್ರೀಯ ಮಟ್ಟದ ಆಂದೋಲನ ಆಗಬೇಕಾಗಿದೆ. ಈ ಆಂದೋಲನಕ್ಕೆ ವಿದ್ಯಾರ್ಥಿಗಳು, ಶಾಲೆಗಳು, ಶಿಕ್ಷಕರು, ಪೋಷಕರು ಮತ್ತು ಸಮುದಾಯಗಳು ಜೊತೆಯಾಗಿ ಈ ಸದರಿ ಪ್ರಮುಖ ಗುರಿಗಳನ್ನು ಮತ್ತು ಉದ್ದೇಗಳನ್ನು ನಿರ್ವಹಿಸಲು ಸಹಾಯ ಮಾಡಲು ಸಾಧ್ಯವಿರುವ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಟ್ಟು ಬೆಂಬಲಿಸಬೇಕು ಮತ್ತು ಪ್ರೋತ್ಸಾಹಿಸಬೇಕು, ಇದು ಮಕ್ಕಳ ಭವಿಷ್ಯದ ಎಲ್ಲಾ ಕಲಿಕೆಯ ಆಧಾರವಾಗುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ, ಇದಕ್ಕೆ ಪೂರಕವಾಗಿ ನಾನು ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಇಸಿಸಿಇ ನ ನಿಯಮಗಳನ್ನು ಅನುಸರಿಸಿಕೊಂಡು,ಎಫ್ ಎಲ್ ಎನ್ ನ ಗುರಿ ಮತ್ತು ಉದ್ದೇಗಳನ್ನು ಸಾಧಿಸುವಲ್ಲಿ ನನ್ನ ಕೈಲಾದ ಮಟ್ಟಿಗೆ ನನ್ನ ಕರ್ತವ್ಯ ನಿರ್ವಹಿಸುತ್ತವೆ,ಹಾಗೂ ಮಕ್ಕಳಿಗೆ ಕಲಿಕಾ ವಾತಾವರಣವನ್ನು ಸೃಷ್ಟಿಸಿ,ಹೆಚ್ಚಿನ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದು ನನ್ನ ಆದ್ಯ ಕರ್ತವ್ಯ ವಾಗಿದೆ. ಧನ್ಯವಾದಗಳು