URL tinyurl,com/znmhttps://mohinpashabi.blogspot.com/2021/10/url.html?m=1n24w
ಮೋಹಿನ್ ಪಾಶಾಬಿ ಸ ಶಿ GCHPS KOPPAL
ಇಸಿಸಿಇ ಎಂದರೆ-Early Childhood Care and Education--- ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಶಾಲಾ ವ್ಯಾಸಂಗ ಕ್ರಮದ 10+2,ರಚನೆಯನ್ನು 3-8,8-11,11-14ಮತ್ತು 14-18ವಯಸ್ಸಿನವರಿಗೆ ಅನುಗುಣವಾದ 5+3+3+4ವ್ಯಾಸಂಗ ರಚನೆ ಯಿಂದ ಬದಲಾಯಿಸಲಾಗುವ ಮಗುವಿನ ಮಾನಸಿಕ ಸಾಮರ್ಥ್ಯದ ಅಭಿವೃದ್ಧಿ ಯ ನಿರ್ಣಾಯಕ ಹಂತವೇ ಇಸಿಸಿಇ ಆಗಿದೆ. ಅದು ಶಾಲಾ ಪಠ್ಯಕ್ರಮ ಮತ್ತು ಬೋಧನಾ ಕ್ರಮವು ಕಲಿಯುವವರಲ್ಲಿ 21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ಅಗತ್ಯ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆ ಯನ್ನು ಹೆಚ್ಚಿಸಲು ಪಠ್ಯಕ್ರಮದ ವಿಷಯಗಳನ್ನು ಕಡಿಮೆ ಮಾಡುವುದು ಮತ್ತು ಅನುಭವಿ ಕಲಿಕೆಯ ಮೇಲೆ ಹೆಚ್ಚಿನ ಗಮನವನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ,ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆ ಯಲ್ಲಿ ಹೆಚ್ಚಿನ ನಮ್ಯತೆ ಇರುತ್ತದೆ. ಕಲೆ ಮತ್ತು ವಿಜ್ಞಾನಗಳ ನಡುವೆ, ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ, ವೃತ್ತಿಪರ ಮತ್ತು ಶೈಕ್ಷಣಿಕ ವಿಭಾಗಗಳ ನಡುವೆ ಯಾವುದೇ ಕಟ್ಟುನಿಟ್ಟಿನ ಪ್ರತ್ಯೇಕತೆಯ ಕಟ್ಟುನಿಟ್ಟಿನ ಪ್ರತ್ಯೇಕತೆಯ ಇಲ್ಲದಿರಲು ಇಸಿಸಿಇ ಇಂದು ಅತೀ ಮುಖ್ಯವಾಗಿದೆ.ಶಾಲೆ ಮತ್ತು ಜೀವನದಲ್ಲಿ ಕಲಿಕೆಗೆ ಇಸಿಸಿಇ ಈ ಕೆಳಗಿನ ಆಧಾರಗಳನ್ನು ಒದಗಿಸುತ್ತದೆ. 1.ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು. 2.ಮುಕ್ತ ಮತ್ತು ದೂರ ಶಿಕ್ಷಣ ನೀಡುವುದು. 3.ಆನ್ ಲೈನ್ ಶಿಕ್ಷಣ ಮತ್ತು ಡಿಜಿಟಲ್ ಶಿಕ್ಷಣ ನೀಡುವುದು. 4.ಶಿಕ್ಷಣದಲ್ಲಿ ತಂತ್ರಜ್ಞಾನ ಒದಗಿಸುವುದು. 5.ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡುವುದು. ಧನ್ಯವಾದಗಳು