URL https://tinyurl,com/n3flnactivity/

ಆರಂಭಿಕ ವರ್ಷಗಳಲ್ಲಿ ಮಕ್ಕಳು ಶಾಲೆಗೆ ಬಂದಾಗ ನಮಗೆ ವಿಭಿನ್ನ ರೀತಿಯ ಅನುಭವಗಳು ಆಗುತ್ತವೆ.ಅವು--1.ಮಗುವಿನ ಮುಗ್ಧತೆ, ಮುಕ್ತ ಮತ್ತು ಸ್ವಚ್ಛ ಮನಸ್ಸು ಅರ್ಥವಾಗುತ್ತದೆ. 2.ಅವರು ಬೇರೆ ಬೇರೆ ಕುಟುಂಬ ಮತ್ತು ಪರಿಸರದಿಂದ ಬಂದವರಾಗಿರುತ್ತಾರೆ..3.ಅವರ ಮನಸ್ಸಿನಲ್ಲಿ ಯಾವುದೇ ಅನುಮಾನಗಳು ಮತ್ತು ಸಂದೇಹಗಳು ಇರುವುದಿಲ್ಲ. 4.ಕಲಿಯಲು ಸ್ವತಂತ್ರರಾಗಿರುತ್ತಾರೆ.5.ಕಲಿಯಲು ಸದೃಢ ದೇಹ ಮತ್ತು ಮನಸ್ಸು ಹೊಂದಿರುವುದು ಕಂಡು ಬರುತ್ತದೆ ಈ ರೀತಿಯಾಗಿ ಇನ್ನೂ ಹಲವಾರು ಮರೆಯಲಾಗದ ಅನುಭವ ಗಳಾಗುತ್ತವೆ..ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಸೂಚನೆಗಳನ್ನ ನೀಡಲಾಗುವುದಿಲ್ಲ, ಏಕೆಂದರೆ ಮಕ್ಕಳು ವಿವಿಧ ರೀತಿಯ ಕೌಟುಂಬಿಕ ಹಿನ್ನೆಲೆ ಮತ್ತು ಸನ್ನೀವೇಶಗಳಿಗೆ ಹೊಂದಿಕೊಂಡು ಶಾಲೆಗೆ ಬರುತ್ತಾರೆ ಮತ್ತು ಮನೆಯ ವಾತಾವರಣದಲ್ಲಿ ವೈವಿಧ್ಯತೆಯನ್ನು ಹೊಂದಿರುವುದು ಕಂಡು ಬರುತ್ತದೆ. ವಿಭಿನ್ನ ಕಲಿಕೆಯ ಅಗತ್ಯತೆಗಳನ್ನು ಹೊಂದಿರುವ ವಿಭಿನ್ನ ಹಿನ್ನೆಲೆಯ ಮಕ್ಕಳು ಶಾಲೆಗೆ ಪ್ರವೇಶ ಮಾಡಿದಾಗ ಎಲ್ಲಾ ವಿದ್ಯಾರ್ಥಿಗಳು ತರಗತಿ ಮಟ್ಟದ ವಿಷಯ ಮಾನದಂಡಗಳನ್ನು, ಸಮಯ ನಿಗದಿತ ಕಲಿಕಾ ವ್ಯವಸ್ಥೆಯಲ್ಲಿ  ಒಳಗೊಳ್ಳಲು ಮತ್ತು ಪರೀಕ್ಷಿಸಲು ಸಿದ್ಧರಾಗಿರಬೇಕು ಎಂದು ನಿರೀಕ್ಷೆ ಮಾಡಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಸಮಯ ಮಕ್ಕಳು ಆಳವಾದ ತಿಳಿವಳಿಕೆ ಮತ್ತು ಅನ್ವಯದ ಮಟ್ಟಕ್ಕೆ ಕಲಿಯುತ್ತಾರೆಯೇ?ಎಂದು ಮೇಲ್ವಿಚಾರಣೆ ಮಾಡದೆ,ಪಠ್ಯ ಪುಸ್ತಕಗಳನ್ನು ಪೂರ್ಣಗೊಳಿಸುವುದರ ಮೇಲೆಯೇ ಗಮನ ಕೇಂದ್ರಿಕರಿಸಲಾಗುತ್ತದೆ.ಇದೇ ರೀತಿಯ ಸೂಚನೆಗಳನ್ನು ಅವರ ಕಲಿಕೆಯ ಮಟ್ಟವನ್ನು ಪರಿಗಣಿಸದೆ,ಮತ್ತು ಎಲ್ಲಾ ಮಕ್ಕಳಿಗೆ ಒಂದು ಬಾರಿ ಪರೀಕ್ಷೆಯನ್ನು ನಡೆಸಿ, ಶೀಘ್ರವಾಗಿ ಉತ್ತೀರ್ಣ ಮತ್ತು ಅನುತ್ತೀರ್ಣ ಎಂದು ವರ್ಗೀಕರಿಸಿ ಫಲಿತಾಂಶ ನೀಡಲಾಗುತ್ತದೆ. 3ನೇ ತರಗತಿಯ ಕೊನೆಯಲ್ಲಿ ಮಕ್ಕಳು ಕಲಿಕಾ ವ್ಯತ್ಯಾಸಗಳನ್ನು ಸ್ಥಿರಗೊಳಿಸಿಕೊಂಡು,ತಮ್ಮ ಜೀವನದುದ್ದಕ್ಕೂ ಇವುಗಳನ್ನು ಅನುಸರಿಸಿಕೊಂಡು ಹೋಗುತ್ತಾರೆ. ಧನ್ಯವಾದಗಳು.  ಮೋಹಿನ್ ಪಾಶಾಬಿ ಸ ಶಿ GCHPS KOPPAL.